Standard Yellow on Black Yellow on Blue Fuchsia on Black
Font Decrease Standard Font Increase
Default width Wider width Widest width

Under Construction

Site is under Development and for Internal use of the Department only

ಬಸವಕಲ್ಯಾಣ ಅಭಿವೃದ್ಧಿ ಮಂಡಳಿ

ಬಸವಕಲ್ಯಾಣವು ಕರ್ನಾಟಕ ಒಳಗೊಂಡು ಮಧ್ಯ ಭಾರತ ಹಾಗೂ ದೇಶದ ವಿವಿಧ ಭಾಗವನ್ನಾಳಿದ ಚಾಲುಕ್ಯ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಹಿಂದೂ ಕಾಯ್ದೆಯ ಮಿತಾಕ್ಷರ ಕಾಯ್ದೆಯು ಬಸವಕಲ್ಯಾಣದಿಂದಲೇ ಪ್ರಾರಂಭವಾಯಿತು. ಈ ಪದ್ದತಿಯು ಚಾಲುಕ್ಯ ನ್ಯಾಯಾಲಯದಲ್ಲಿ ಮಹಾನ್ ವಿದ್ವಾಂಸರಾದ ವಿಜ್ಞಾನೇಶ್ವರರಿಂದ ಬರೆಯಲ್ಪಟ್ಟಿತ್ತು. ಬಸವೇಶ್ವರರು ಕೆಲವು ಕಾಲ ಪ್ರಧಾನಿ ಹುದ್ದೆಯಲ್ಲಿದ್ದು, (ಮಹಾ ಮಂತ್ರಿ) ವೃತ್ತಿ ಘನತೆ, ಸ್ತ್ರೀ ಪುರುಷ ಸಮಾನತೆ ಬಗ್ಗೆ, ವರ್ಗರಹಿತ, ವರ್ಣರಹಿತ ಸಮಾಜ ಸೃಷ್ಟಿಸುವ ತತ್ವಗಳನ್ನು ಹರಡಿದರು. ಆದಾಗ್ಯೂ, ಬಸವಕಲ್ಯಾಣದಲ್ಲಿರುವ ಸಂಬಂಧಿಸಿದ ಸಾಂಸ್ಕೃತಿಕ ಸ್ಮಾರಕಗಳು ಹಾಳಾಗುವ ಸ್ಥಿತಿಯಲ್ಲಿವೆ. ಈ ಸ್ಥಳದ, ಸ್ಮಾರಕಗಳ ಪ್ರಾಮುಖ್ಯತೆಯನ್ನು ಗಮನಿಸಿ ಕರ್ನಾಕಟ ಸರ್ಕಾರವು ಈ ಎಲ್ಲಾ ಪ್ರಾಚೀನ ಸ್ಮಾರಕಗಳನ್ನು ನವೀಕರಿಸಲು ಮತ್ತು ಈ ಸ್ಥಳವನ್ನು ಅಂತರಾಷ್ಟ್ರೀಯ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಿದೆ. ಈ ಕಾರಣಕ್ಕಾಗಿ ಬಸವಕಲ್ಯಾಣ ಅಭಿವೃದ್ದಿ ಮಂಡಳಿ ಅಧಿನಿಯಮ 2005 ಎಂಬ ಒಂದು ಹೊಸ ಕಾಯ್ದೆಯನ್ನು ರಚಿಸಲಾಗಿದೆ. ಬಸವಕಲ್ಯಾಣ ಅಭಿವೃದ್ದಿ ಮಂಡಳಿಯನ್ನು ಕೂಡಲಸಂಗಮ ಅಭಿವೃದ್ದಿ ಮಂಡಳಿಯ ಮಾದರಿಯಲ್ಲಿಯೇ ರಚಿಸಲಾಗಿದೆ. ಈ ಮಂಡಳಿಗೆ ಇಲ್ಲಿಯವರೆಗೆ ಕೆಳಕಂಡಂತೆ ಅನುದಾನ ಬಿಡುಗಡೆ ಮಾಡಲಾಗಿದೆ.
 
2005-06 ರೂ.50.00 ಲಕ್ಷಗಳು
2006-07 ರೂ.2000.00 ಲಕ್ಷಗಳು
2008-09 ರೂ.1600.00 ಲಕ್ಷಗಳು
2009-10 ರೂ.250.00 ಲಕ್ಷಗಳು
ಮಂಡಳಿಯ ವತಿಯಿಂದ ಒಟ್ಟು ರೂ.5628 ಲಕ್ಷಗಳ ಅಂದಾಜು ವೆಚ್ಚದ 52 ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅವು ಪ್ರಗತಿಯಲ್ಲಿವೆ.

ಭಾರತದ ರಾಷ್ಟ್ರೀಯ ಪೋರ್ಟಲ್

 India Portal

ಅಂತರಜಾಲದ ನಿರ್ವಹಣೆ

ಕಂದಾಯ ಇಲಾಖೆ,
5ನೇ ಮಹಡಿ, ಬಹುಮಹಡಿಗಳ ಕಟ್ಟಡ, 2ನೇ ಹಂತ,
ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು 560 001

ಅಂತರಜಾಲದ ರಚನೆ

National Informatics Centre, Karnataka
ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ಕರ್ನಾಟಕ