Standard Yellow on Black Yellow on Blue Fuchsia on Black
Font Decrease Standard Font Increase
Default width Wider width Widest width

Under Construction

Site is under Development and for Internal use of the Department only

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಇಲಾಖೆ

 
 
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ
ಕರ್ನಾಟಕ ಸರ್ಕಾರವು ಅಸಹಾಯಕ, ಅಶಕ್ತ ವ್ಯೆಕ್ತಿಗಳಿಗೆ, ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ಅನೇಕ ಸಾಮಾಜಿಕ ಭದ್ರತೆ ಯೋಜನೆಗಳನ್ನು ಕಂದಾಯ ಇಲಾಖೆಯ ಮೂಲಕ ಅನುಷ್ಟಾನಗೊಳಿಸುತ್ತಿರುತ್ತದೆ. ಕಂದಾಯ ಇಲಾಖೆಯ ತಹಸೀಲ್ದಾರ್‌ಗಳು ಮಂಜೂರಾತಿ ಅಧಿಕಾರಿಗಳಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರುಗಳು ಮೇಲ್ವಿಚಾರಣಾಧಿಕಾರಿಗಳಾಗಿರುತ್ತಾರೆ. ಈ ಯೋಜನೆಗಳನ್ನು ಇನ್ನು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವನ್ನು ಕಂದಾಯ ಇಲಾಖೆಯಡಿಯಲ್ಲಿ ಸೃಜಿಸಲಾಗಿದೆ. ನಿರ್ದೇಶನಾಲಯವು ಸರ್ಕಾರಿ ಆದೇಶ ಸಂಖ್ಯೆಃಕಂ ಇ 44 ಎಂಎಸ್‌ಟಿ 2007, ದಿನಾಂಕಃ08-05-2007ರಂತೆ ಅಸ್ತಿತ್ವಕ್ಕೆ ಬಂದಿದೆ ನಿರ್ದೇಶನಾಲಯದ ಮುಖ್ಯ ಉದ್ದೇಶವೇನೆಂದರೆ ಸಾಮಾಜಿಕ ಭದ್ರತೆಗಳಿಗೆ ಸಂಬಂಧಪಟ್ಟ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವುದಾಗಿರುತ್ತದೆ.
1.ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿಯಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ವೇತನ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲರ ವೇತನ ಯೋಜನೆ, ಅನ್ನಪೂರ್ಣ ಯೋಜನೆ ಮತ್ತು ರಾಷ್ಟ್ರೀಯ ಕುಟುಂಬ ನೆರವು ಯೋಜನೆಃ
. ಇಂದಿರಾ ಘಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಯೋಜನೆಃ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್‌ ಮಂತ್ರಾಲಯ ನಿಗದಿಪಡಿಸಿರುವಂತೆ ಬಡತನ ರೇಖೆಗಿಂತ (ಬಿಪಿಎಲ್‌) ಕೆಳಗಡೆ ಇರುವ ಕುಟುಂಬಗಳಿಗೆ ಸೇರಿದ 65 ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳ ವ್ಯೆಕ್ತಿಗಳಿಗೆ ರೂ.400 ಗಳ ಮಾಸಾಶನವನ್ನು ನೀಡಲಾಗುವುದು. ಇದರಲ್ಲಿ ರೂ.200 ಗಳನ್ನು ಕೇಂದ್ರ ಸರ್ಕಾರ ಹಾಗೂ ರೂ.200 ಗಳನ್ನು ರಾಜ್ಯ ಸರ್ಕಾರ ಭರಿಸುತ್ತವೆ.
. ರಾಷ್ಟ್ರೀಯ ಕುಟುಂಬ ನೆರವು ಯೋಜನೆಃ ಬಡತನ ರೇಖೇಗಿಂತ ಕೆಳಗೆ ಇರುವ ಕುಟುಂಬದ 18 ಕ್ಕಿಂತ ಹೆಚ್ಚಿಗೆ ಮತ್ತು 64 ಕ್ಕಿಂತ ಕಡಿಮೆ ವಯಸ್ಸುಳ್ಳ ದುಡಿಯುವ ವ್ಯೆಕ್ತಿಯ ಮರಣವಾದಲ್ಲಿ ರೂ.10.000 ಗಳ (ಒಂದು ಬಾರಿ ಹತ್ತು) ಸಹಾಯಧನವನ್ನು ನೀಡಲಾಗುವುದು.
. ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ವೇತನ ಯೋಜನೆಃ ಕೇಂದ್ರ ಸರ್ಕಾರವು ರೂ. 200 ಗಳ ಮಾಸಾಶನವನ್ನು 40 ರಿಂದ 64 ವರ್ಷದ ಹಾಗೂ ಬಡತನ ರೇಖೆಗಿಂತ ಕೆಳಗಿರುವ ವಿಧವೆಯರಿಗೆ ನೀಡುತ್ತದೆ. ಪ್ರಸ್ತುತ ಈಗಾಗಲೆ ರಾಜ್ಯ ಸರ್ಕಾರದ ನಿರ್ಗತಿಕ ವಿಧವಾ ವೇತನದಡಿ ಮಾಸಾಶನ ಪಡೆಯುತ್ತಿರುವ 3.25 ಲಕ್ಷ ವಿಧವೆಯರಿಗೆ ಸಹಾಯಧನ ನೀಡಲು ಅನುಮತಿಸಿರುತ್ತದೆ.
10.1 ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲರ ವೇತನ ಯೋಜನೆಃ  ಕೇಂದ್ರ ಸರ್ಕಾರವು ರೂ.200 ಗಳ ಮಾಸಾಶನವನ್ನು 18 ರಿಂದ 64 ವರ್ಷದ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಹಾಗೂ ಬಹುವಿಧ ಅಂಗವಿಕಲತೆ ಇರುವ ಅಂಗವಿಕಲರಿಗೆ ನೀಡುತ್ತದೆ. ಪ್ರಸ್ತುತ ಈಗಾಗಲೇ ರಾಜ್ಯ ಸರ್ಕಾರದ ಅಂಗವಿಕಲ ವೇತನದಡಿ ಮಾಸಾಶನ ಪಡೆಯುತ್ತಿರುವ 90 ಸಾವಿರ ಅಂಗವಿಕಲರಿಗೆ ಸಹಾಯಧನ ನೀಡಲು ಅನುಮತಿಸಿರುತ್ತದೆ.
10.2 ನಿರ್ಗತಿಕ ವಿಧವಾ ವೇತನ ಯೋಜನೆಃ ಹದಿನೆಂಟು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹಾಗೂ ಕಾನೂನು ರೀತ್ಯಾ ಪತಿ ಮೃತ ಪಟ್ಟಿರುವ ನಿರ್ಗತಿಕ ವಿಧವೆಯರಿಗೆ ತಿಂಗಳಿಗೆ ರೂ. 400/- ಗಳ ಮಾಸಾಶನವನ್ನು ನೀಡಲಾಗುವುದು. ಮಾಸಾಶನವನ್ನು ಮೃತರಾಗುವವರೆಗೆ ಅಥವಾ ಪುನರ್ವಿವಾಹವಾಗುವವರೆಗೆ ಅಥವಾ ಉದ್ಯೋಗ ಪಡೆದು ವಾರ್ಷಿಕ ಆದಾಯ ರೂ.6000 ಕ್ಕಿಂತ ಹೆಚ್ಚಿಗೆ ಪಡೆಯುವವರೆಗೆ ನೀಡಲಾಗುವುದು.
10.3 ಅಂಗವಿಕಲರ ಮಾಸಾಶನ ಯೋಜನೆಃ ಶೇಕಡಾ 40% ಕ್ಕಿಂತ ಮೇಲ್ಪಟ್ಟ ಕೆಳಕಂಡ ಅಂಗವಿಕಲತೆ ಹೊಂದಿರುವ ಅಂಗಿವಿಕಲರಿಗೆ ತಿಂಗಳಿಗೆ ರೂ.400/- ಹಾಗೂ ಶೇಕಡಾ 75% ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವಿಕಲತೆಯುಳ್ಳ ವ್ವೆಕ್ತಿಗಳಿಗೆ ರೂ.1000/- ಮಾಸಿಕ ವೇತನ ನೀಡಲಾಗುವುದು.
ಅ)ಅಂಧತ್ವ/ ಮಂದದೃಷ್ಟಿ
ಆ) ಕುಷ್ಟರೋಗ ನಿವಾರಿತರಾದ
ಇ) ಶ್ರವಣದೋಷವುಳ್ಳವರು
ಈ) ಚಲನವಲನ ಅಂಗವಿಕಲತೆ
ಉ) ಬುದ್ದಿಮಾಂದ್ಯತೆ
ಊ) ಮಾನಸಿಕ ಅಸ್ವಸ್ತತೆ.
10.4 ಅನ್ನಪೂರ್ಣ ಯೋಜನೆಃ 65 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ನಿರ್ಗತಿಕ ವ್ಯೆಕ್ತಿಗಳಿಗೆ ಆಹಾರ ಭದ್ರತೆಯನ್ನೂದಗಿಸಲು 10 ಕಿಲೋ ಗ್ರಾಂ ಅಕ್ಕಿಯನ್ನು ಪ್ರತಿ ತಿಂಗಳು ಉಚಿತವಾಗಿ ವಿತರಿಸಲಾಗುವುದು.
10.5 ಸಂಧ್ಯಾ ಸುರಕ್ಷಾ ಯೋಜನೆಃ 65 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ವಾರ್ಷಿಕ ಆದಾಯ ರೂ.20,000/- ಕ್ಕಿಂತ ಕಡಿಮೆ ಇರುವ ವ್ವಯೆಕ್ತಿಗಳಿಗೆ ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಮಾಸಿಕ ರೂ.400/- ಮಾಸಾಶನವನ್ನು ನೀಡಲಾಗುತ್ತದೆ, ಅರ್ಹ ವ್ಯೆಕ್ತಿಗಳನ್ನು ಕೆಳಕಂಡ ಉದ್ಯೋಗದಲ್ಲಿ ನಿರತರಾಗಿರಬೇಕಿರುತ್ತದೆ.
(ಅ) ಸಣ್ಣ ರೈತರು
(ಆ) ಅತೀ ಸಣ್ಣ ರೈತರು
(ಇ) ಕೃಷಿ ಕಾರ್ಮಿಕರು
(ಈ) ನೇಕಾರರು
(ಉ) ಮೀನುಗಾರರು
(ಊ) ಅಸಂಘಟಿತ ವಲಯದ ಕಾರ್ಮಿಕರು, (ಕಟ್ಟಡ ಹಾಗೂ ಇತರೆ ನಿರ್ಮಾಣದ ಕಾರ್ಮಿಕರು ಈ ಯೋಜನೆಯಡಿಯಲ್ಲಿ ಅರ್ಹರಾಗಿರುವುದಿಲ್ಲ).
10.6 ಆದರ್ಶ ವಿವಾಹ ಯೋಜನೆಃ ರಾಜ್ಯದಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ಜನಪ್ರಿಯಗೊಳಿಸಲು ಕನಿಷ್ಟ 25 ವಿವಾಹಗಳು ನಗರ ಪ್ರದೇಶಗಳಲ್ಲಿ ಮತ್ತು ಕನಿಷ್ಟ 10 ವಿವಾಹಗಳು ಗ್ರಾಮಾಂತರ ಪ್ರದೇಶಗಳಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರತಿ ವಿವಾಹಕ್ಕೆ 2 ವರ್ಷದ ಠೇವಣಿ ರೂಪದಲ್ಲಿ ರೂ.1000/- ಪ್ರೋತ್ಸಾಹ ಧನ ನೀಡಲಾಗುವುದು.
10.7 ಅಂತ್ಯ ಸಂಸ್ಕಾರ ಯೋಜನೆಃ  ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಕುಟುಂಬದ ಸದಸ್ಯರು ಮೃತ ಪಟ್ಟಲ್ಲಿ ಅವರ ಅಂತಿಮ ಕ್ರಿಯೆಗಾಗಿ ನೆರವು ನೀಡಲು ರೂ.1000/-ಗಳನ್ನು ನೀಡಲಾಗುವುದು.
10.8 ಆಮ್‌ ಆದ್ಮಿ ಭೀಮಾ ಯೋಜನೆಃ ಗ್ರಾಮೀಣ ಭೂರಹಿತ ಕುಟುಂಬಗಳ 18 ರಿಂದ 59 ವರ್ಷಗಳೊಳಗಿನ ದುಡಿಯುವ ಮುಖ್ಯಸ್ಥನ ಮರಣದ/ ಅಂಗವಿಕಲತೆಯ ಸಂದರ್ಭದಲ್ಲಿ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಆಮ್‌ ಆದ್ಮಿ ಬೀಮಾ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ಕುಟುಂಬದ ಮುಖ್ಯಸ್ಥರಿಗೆ ರೂ.200-00ಗಳ ವಿಮಾ ಕಂತನ್ನು ಭಾರತೀಯ ಜೀವನ ಭೀಮಾ ನಿಗಮಕ್ಕೆ ನೀಡಲಾಗುವುದು. ಇದರಲ್ಲಿ ರೂ.100-00 ರಾಜ್ಯ ಸರ್ಕಾರ ಮತ್ತು ಉಳಿದ ರೂ.100-00 ಕೇಂದ್ರ ಸರ್ಕಾರ ಭರಿಸುತ್ತದೆ.
ಯೋಜನೆಯ ಲಾಭಗಳುಃ 1. ನೈಸರ್ಗಿಕ ಸಾವು ರೂ.30,000-00
                           2. ಆಕಸ್ಮಿಕ ಸಾವು ರು.75,000-00
                           3. ಶಾಶ್ವತ ಅಂಗವಿಕಲತೆ ರೂ.75,000-00
                             4. ಭಾಗಶಃ ಅಮಗವಿಕಲತೆ ರೂ.37,500-00
                             5. ವಿದ್ಯಾರ್ಥಿ ವೇತನಃ ಎರಡು ಮಕ್ಕಳಿಗೆ ಸೀಮಿತ 9 ರಿಂದ 12 ನೇ ತರಗತಿವರೆಗೆ ಮಾತ್ರ ಪ್ರತಿ      
                               ತಿಂಗಳಿಗೆ ರೂ.100-00 ಪ್ರತಿ ವಿದ್ಯಾರ್ಥಿಗೆ.
 

ಅಂತರಜಾಲ ತಾಣ: http://dssp.kar.nic.in/

ಭಾರತದ ರಾಷ್ಟ್ರೀಯ ಪೋರ್ಟಲ್

 India Portal

ಅಂತರಜಾಲದ ನಿರ್ವಹಣೆ

ಕಂದಾಯ ಇಲಾಖೆ,
5ನೇ ಮಹಡಿ, ಬಹುಮಹಡಿಗಳ ಕಟ್ಟಡ, 2ನೇ ಹಂತ,
ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು 560 001

ಅಂತರಜಾಲದ ರಚನೆ

National Informatics Centre, Karnataka
ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ಕರ್ನಾಟಕ